ತಮಾಷೆ ಆದರೂ ಸತ್ಯ ::

ತಮಾಷೆ ಆದರೂ ಸತ್ಯ ::     

ನೀನು ದೊಡ್ಡ ಕ್ರಿಮಿನಲ್ ಆಗಬೇಕೆಂದು ಪೋಲೀಸ್ ಬಯಸಿದರೆ, ರೋಗಿಯಾಗಲೆಂದು ಬಯಸುತ್ತಾನೆ ಡಾಕ್ಟರು. ಮೊಕದಮೆಗಳ ನಡುವೆ ಸಿಲುಕಲಿ ಎಂದು ಬಯಸುತ್ತಾನೆ ವಕೀಲ. ಹಲ್ಲುಗಳಿಗೆ ಹುಳಬೀಳಲೆಂದು ದಂತ ವೈದ್ಯ. ಸ್ವಂತ ಮನೆ ಖರೀದಿಸದಿರಲೆಂದು ಬಾಡಿಗೆ ಮನೆ ಮಾಲೀಕ. ನಿನ್ನ ವಾಹನ ಹಾಳಾಗಲೆಂದು ಮೆಕಾನಿಕ್ ಬಯಸಿದರೆ ಸತ್ತೇ ಹೋಗಲೆಂದು ಶವ ಪೆಟ್ಟಿಗೆ ಮಾರಾಟಗಾರ. ಮನೆಯ ಫೇನ್,ಪಂಪುಗಳು ಹಾಳಾಗಲೆಂದು ಇಲೆಕ್ಟ್ರೀಷನ್ ಬಯಸಿದರೆ. ಲೋಕದವರೆಲ್ಲಾ ಗುಟ್ಕಾ ತಿನ್ನಲೆಂದು ಅಡಿಕೆ ಬೆಳೆಗಾರ ಬಯಸುವನು. ಪ್ರತೀ ದಿನವು ತನ್ನ ಊರಿನವರು ಸಾಯಲೆಂದು ಕುಲಾಲ ಬಯಸಿದರೆ. ಎಲ್ಲರೂ ಕಳ್ಳುಕುಡುಕರಾಗಲೆಂದು ಕಳ್ಳು ವ್ಯಾಪಾರಿ ಬಯಸುವ. ಮನುಜರಿಗೆ ಚಿಂತೆ ಬರಲೆಂದು ಜೋಯಿಸ ಬಯಸಿದರೆ. ನೀನು ಸತ್ತರೂ ದಕ್ಷಣೆ ಕೇಳುವ ಪುರೋಹಿತ. ತಂದೆ ಮತ್ತು ಮಗನಿಗೆ ಪಾಲಾಗಿ ಮನೆ ಎರಡಾಗಲೆಂದು ಕಾಂಟ್ರೆಕ್ಟರ್ ಬಯಸಿದರೆ. ಹಳೆಯ ಸೋಪ್ಟವೇರ್ ಗಳೆಲ್ಲಾ ಎಕ್ಕುಟ್ಟೋಗಲಿ ಎಂದು ಬಯಸುವ ಇಂಜಿನಿಯರ್.. ಆದರೆ ಒಬ್ಬ ಕಳ್ಳ ಮಾತ್ರ "ನಿಮಗೆ ಧನ-ಸಂಪತ್ತು,ಸಕಲೈಶ್ವರ್ಯ ಹಾಗೂ ಸುಖವಾದ ಗಾಢ ನಿದ್ರೆ " ಕರುಣಿಸೆಂದು ಭಗವಂತನಲ್ಲಿ ಬೇಡುತ್ತಿರುತ್ತಾನೆ.😀😀😀
Share on Google Plus

About Jeevan turadagi

0 ಕಾಮೆಂಟ್‌(ಗಳು):

Post a Comment