ಹಾಗಂತ ಇದು ಮಾರುಕಟ್ಟೆಯಲ್ಲಿ ಇಲ್ಲ ಎಂದುಕೊಳ್ಳಬೇಡಿ. ಮೊದಲ ಬಾರಿ ನೋಡಿದರೂ
ನಂಬಲು ಸಾಧ್ಯವಾಗದ "ಟಾಲ್‌ಕೇಸ್" ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.! ಕೇವಲ
4000 ರೂಪಾಯಿ ಬೆಲೆ ಇರುವ ಈ ಮೊಬೈಲ್ ಉಪಯೋಗ ಮಾತ್ರ ಐಫೋನ್ ಮತ್ತು
ಸ್ಯಾಮ್‌ಸಂಗ್‌ಗಿಂತಲೂ ಹೆಚ್ಚು!!. ಹಾಗಾದರೆ ಈ ಮೊಬೈಲ್ ಹೇಗಿದೆ ಇದರ ಉಪಯೋಗಗಳೇನು
ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.
ಕ್ರೆಡಿಟ್ ಕಾರ್ಡ್ ದಪ್ಪವಿದೆ ಈ ಮೊಬೈಲ್!!
ಈವಾಗ ಮೋಬೈಲ್ ಸೈಜ್‌ದೆ ಮಾತು. 5.5 ಇಂಚ್ ಸೈಜ್ ಇರುವ ಮೊಬೈಲ್ ಬೇಕು ಎನ್ನುವ ಇಂದು
ಕ್ರೆಡಿಟ್ ಕಾರ್ಡ್ ದಪ್ಪದ ಮೊಬೈಲ್ ಇದೆ ಎಂದರೆ ಆಶ್ಚರ್ಯವಾಗೋದು ಖಂಡಿತ. ಆದರೂ ಈ
ಮೊಬೈಲ್ ಕ್ರೆಡಿಟ್ ಕಾರ್ಡ್ ಸೈಜ್‌ನಲ್ಲಿದ್ದು, ನಿಮ್ಮ ಪರ್ಸ್ ಒಳಗೆ ಇದನ್ನು ಇಡಬಹುದು!!
ಹೆಚ್‌ಡಿ ಸ್ಕ್ರೀನ್ ಹೊಂದಿದೆ.
ಬೇಸಿಕ್ ಮೊಬೈಲ್‌ಗಳಂತೆ ಚಿಕ್ಕದಾದ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ಹೆಚ್‌ಡಿ
ಸ್ಕ್ರೀನ್ ಹೊಂದಿದೆ. ಸ್ಮಾರ್ಟ್‌ಫೊನ್ ಇದ್ದರೂ ಇನ್ನೊಂದು ಕೀಪ್ಯಾಡ್ ಮೊಬೈಲ್
ಇಟ್ಟುಕೊಳ್ಳುವವರಿಗೆ ಈ ಫೋನ್ ಹೇಳಿಮಾಡಿಸಿದಂತಿದೆ. ಏಕೆಂದರೆ ನಿಮ್ಮ ಸ್ಮಾರ್ಟ್‌ಪೊನ್
ಬ್ಯಾಕ್‌ಕವರ್ ಕೇಸ್‌ಗೆ ಇದನ್ನು ಸ್ಟಿಕ್ ಮಾಡಬಹುದಾಗಿದೆ.

ಹೈ-ಫೈ ಬ್ಲೂಟೂತ್ ಕನೆಕ್ಟರ್!!
ನಿಮ್ಮ ಇನ್ನೊಂದು ಫೋನ್‌ಗೆ ಬ್ಲೂಟೂತ್ ಕನೆಕ್ಟ್ ಮಾಡಬಹುದಾದ ತಂತ್ರಜ್ಞಾನ ಇದರಲ್ಲಿ
ಇದ್ದು, ನಿಮ್ಮ ಸ್ಮಾರ್ಟ್‌ಫೋನ್ ಇಂದ ಇದಕ್ಕೆ ಕನೆಕ್ಷನ್ ನೀಡಬಹುದು. ಇದರಿಂದ ನಿಮ್ಮ
ಸ್ಮಾರ್ಟ್‌ಫೋನ್ ಮರೆತರು ನಿಮ್ಮ ಪಾಕೆಟ್‌ನಲ್ಲಿ ಇಡಬಹುದಾದ ಈ ಫೋನ್‌ನಿಂದ ನಿಮ್ಮ
ಐಫೋನ್ ಕಾರ್ಯಚರಣೆ ನಡೆಸಬಹುದು.





0 ಕಾಮೆಂಟ್(ಗಳು):
Post a Comment